ವಾಯು
	ಭೂವಾತಾವರಣವನ್ನು ರೂಪಿಸುವ ಅನಿಲಗಳ ಮಿಶ್ರಣ (ಏರ್). ಭೂಮಿಯಲ್ಲಿಯ ಬದುಕು, ಹವೆ ಹಾಗೂ ಹಲವು ಪ್ರಾಕೃತಿಕ ವಿದ್ಯಮಾನಗಳ ಮೇಲೆ ವಾಯುವಿನ ಪ್ರಭಾವ ಅಪಾರ. ವಾಯುವಿಗೆ ಸ್ವಂತ ಬಣ್ಣ, ವಾಸನೆ ಅಥವಾ ರುಚಿ ಇಲ್ಲ. ಇದರ ಘಟಕ ಅನಿಲಗಳಲ್ಲಿ ಹಲವು ಅನಿಲಗಳ ಸಾರ (ಕಾನ್ಸೆಟ್ರೇಶನ್) ಸಾಮಾನ್ಯವಾಗಿ ಸ್ಥಿರವಾಗಿರುವುದು. ಅವುಗಳ ಸಾಪೇಕ್ಷ ಶೇಕಡಾ ಸಾರಗಳು: ನೈಟ್ರೊಜನ್ (78.084), ಆಕ್ಸಿಜನ್ (20.946), ಆರ್ಗಾನ್ (0.934), ನಿಯಾನ್ (0.0018), ಹೀಲಿಯಮ್ (0.000574), ಹೈಡ್ರೊಜನ್ (0.00005), ನೀರಿನಬಾಷ್ಪ (0-7), ಕಾರ್ಬನ್ ಡೈ ಆಕ್ಸೈಡ್ (0.01-0.1) ಹಾಗೂ ಓಜೋನ್, ಸಲ್ಫರ್ ಡೈ ಆಕ್ಸೈಡ್, ನೈಟ್ರೊಜನ್ ಡೈ ಆಕ್ಸೈಡ್ ಇಂಥ ಘಟಕಗಳ ಸಾರ ಸ್ಥಿರವಾಗಿಲ್ಲ.

	ವಾಯುವಿನ ಘಟಕ ಅನಿಲಗಳಿಗೆ ವಿಭಿನ್ನ ಭೌತ ಹಾಗೂ ರಾಸಾಯನಿಕ ಗುಣಗಳಿವೆ. ಉದಾಹರಣೆಗೆ ಕಾರ್ಬನ್ ಡೈ ಆಕ್ಸೈಡ್ ಅನಿಲ ದ್ಯುತಿಸಂಶ್ಲೇಷಣೆಯಲ್ಲಿ (ಫೆÇೀಟೊಸಿಂಥೆಸಿಸ್) ಪಾತ್ರವಹಿಸುತ್ತದೆ. ಅವಕೆಂಪು ವಿಕಿರಣವನ್ನು (ಇನ್‍ಫ್ರಾರೆಡ್ ರೇಡಿಯೇಶನ್) ಹೀರುತ್ತದೆ; ಓಜೋನಿನ ಅಣುಗಳು 300 ನ್ಯಾನೊಮೀಟರಿಗಿಂತಲೂ ಹ್ರಸ್ವವಾದ ಅತಿನೇರಿಳೆ ಕಿರಣಗಳನ್ನು ಹೀರುತ್ತವೆ.	
												(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ